vorkady struggles for survivel

vorkady struggles for survivel
Gail

Saturday 14 January 2012

  • ಗೈಲ್‌ ಪೈಪ್‌ಲೈನ್‌
  • ಪ್ರಾಣ ಕೊಟ್ಟರೂ ಭೂಮಿ ಕೊಡುವುದಿಲ್ಲ
  • ಸಂತ್ರಸ್ತರ ಸಮಿತಿ
  • ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ಸಂತ್ರಸ್ತರು ಒಕ್ಕೊರೊಳಿನಿಂದ ಘೋಷಿಸಿದ್ದಾರೆ.

    • Udayavani | Jan 13, 2012
      ಮಂಜೇಶ್ವರ : ಕೊಚ್ಚಿನ್‌-ಕುಟ್ಟನಾಡು-ಮಂಗಳೂರು-ಬೆಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ಗಾಗಿ ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ಸಂತ್ರಸ್ತರು ಒಕ್ಕೊರೊಳಿನಿಂದ ಘೋಷಿಸಿದ್ದಾರೆ.

      ಮೀಂಜ ಗ್ರಾಮ ಪಂಚಾಯತು ಸಭಾ ಭವನದಲ್ಲಿ ನಡೆದ ಅಹವಾಲು ಆಲಿಕೆಯ ಸಂದರ್ಭದಲ್ಲಿ ಪ್ರಸ್ತುತ ಯೋಜನೆಗೆ ಭೂಮಿ ಕಳೆದುಕೊಳ್ಲಲಿರುವ ಸಂತ್ರಸ್ತರು ಪ್ರಾಣಕೊಟ್ಟರೂ, ಭೂಮಿ ಕೊಡುವುದಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಖಡಾಖಂಡಿತವಾಗಿ ಘೋಷಿಸಿದರು.


      ಕೆವಲ ಎರಡು ಅಡಿ ವ್ಯಾಸದ ನೈಸರ್ಗಿಕ ಅನಿಲ ಪೈಪ್‌ಲೈನ್‌ಗಾಗಿ ಬಡಜನರಿಂದ 66 ಅಡಿ ಅಗಲದಲ್ಲಿ ಭೂಮಿಯನ್ನು ಪಡೆದು ಮಾರುಕಟ್ಟೆ ಮೌಲ್ಯದ ಹತ್ತು ಶೇಕಡಾ ಮೊತ್ತವನ್ನು ನೀಡಿ ಕೈತೊಳೆದುಕೊಳ್ಳುವ ಗೈಲ್‌ಕಂಪೆನಿಯ ಹುನ್ನಾರವನ್ನು ನಡೆಯಲು ಬಿಡುವುದಿಲ್ಲವೆಂದೂ, ಜನವಾಸವಿಲ್ಲದ ಬದಲಿ ಮಾರ್ಗವಾಗಿ ಈ ಪೈಪ್‌ಲೈನನ್ನು ನಿರ್ಮಿಸಲು ಕಂಪೆನಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಸಂತ್ರಸ್ತರು ವಿನಂತಿಸಿದರು.

      ಈ ಅನಿಲ ಪೈಪ್‌ಲೈನ್‌ನ ಸುರಕ್ಷತತೆಯ ಕುರಿತಾಗಿ ಕಂಪೆನಿ ಅಧಿಕಾರಿಗಳು ಯಾವುದೇ ಸ್ಪಷ್ಟ ಭರವಸೆಗಳನ್ನು ನೀಡುತ್ತಿಲ್ಲವೆಂದೂ, ಮಲೆಯಾಳಂ ಗೊತ್ತಿಲ್ಲದ ಜನರಿಗೆ ಕನ್ನಡದಲ್ಲಿ ಭೂಮಿ ತೆರವುಗೊಳಿಸುವ ನೊಟೀಸು ನೀಡದೆ ವಂಚಿಲಾಗುತ್ತಿದೆಯೆಂದೂ ಸಂತ್ರಸ್ತರು ಆಪಾದಿಸಿದರು.

      ನಿಬಿಡ ಜನಸಾಂದ್ರತೆಯಿರುವ ಕೇರಳದಲ್ಲಿ ವಸತಿ ಪ್ರದೇಶಗಳು,ಕೃಷಿಭೂಮಿ ಹಾಗೂ ವಾಣಿಜ್ಯ ಪ್ರದೇಶಗಳ ಮುಖಾಮತರ ಹಾದುಹೋಗಲಿರುವ ಈ ಪೈಪ್‌ಲೈನಿಗೆ ಕರಾವಳಿ ತೀರದಲ್ಲಿ ಸ್ಥಳ ಕಂಡುಕೊಳ್ಳುವುದು ಹೆಚ್ಚು ಸುರಕ್ಷಿತ ಹಾಗೂ ಕಡಿಮೆ ವೆಚ್ಚದಾಯಕವಾದುದು ಎಂದು ಕಾಸರಗೋಡು ಬ್ಲಾಕ್‌ ಪಂಚಾಯತು ಉಪಾಧ್ಯಕ್ಷ ಮೂಸಾ.ಬಿ.ಚೆರ್ಕಳ ಹೇಳಿದರು.

      ಕೆಕೆಎಂಬಿಪಿಎಲ್‌ಗಾಗಿನ ವಿಶೇಷ ಅಧಿಕಾರಿ ಹಾಗೂ ಉಪಜಿಲ್ಲಾಧಿಕಾರಿ ಅಬ್ದುಲ್‌ ನಿಸಾರ್‌ ಈ ಉದ್ದೇಶಿತ ಪೈಪ್‌ಲೈನಿನ ಉಪಯುಕ್ತತೆ ಕುರಿತು ವಿಶದೀಕರಿಸಿ, ಸಂತ್ರಸ್ತರ ವಾದ ಆಲಿಸಿದ ಬಳಿಕ ಯುಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

      ಸಭೆಯಲ್ಲಿ ಗೈಲ್‌ ಅಧಿಕಾರಿ ಜೋರ್ಜ್‌ ಅÂಂಟನಿ, ಕಂದಾಯ ಅಧಿಕಾರಿ ರಾಘವನ್‌, ಮೀಂಜ ಪಂಚಾಯತು ಅಧ್ಯಕ್ಷೆ ಶ್ರಿಮತಿ ಶಂಷಾದ್‌ ಶುಕೂರ್‌, ಉಪಾಧ್ಯಕ್ಷ ಅಬ್ದುಲ್‌ ಕರೀಂ, ಸದಸ್ಯ ಬಿ.ಕೆ.ಮೊಹಮ್ಮದ್‌, ಸಂತ್ರಸ್ತರ ಸಮಿತಿ ಪದಾಧಿಕಾರಿಗಳಾದ ರೋಬರ್ಟ್‌ ಡಿ.ಸೋಜಾ, ಹಮೀದ್‌ ರಹ್ಮಾನಿಯಾ, ಶಶಿಶೇಖರ ಭಟ್‌, ದಿವಾಕರ್‌.ಎಸ್‌.ಜೆ, ಉಮ್ಮರ್‌ ಬೋರ್ಕಳ,ದೂಮಪ್ಪ ಶೆಟ್ಟಿ, ರಾಜೇಶ್‌.ಕೆ.ವಿ ,ಸೀತರಾಮ ಬೇರಿಕೆ, ಮುಂತಾದವರು ಉಪಸ್ಥಿತರಿದ್ದರು.

No comments:

Post a Comment